ಪಾವೆಂ ಆಚಾರ್ಯರ ಕಿರು ಪರಿಚಯ

ಪಾಡಿಗಾರು ವೆಂಕಟರಮಣ ಆಚಾರ್ಯರದು ಕನ್ನಡ ಪತ್ರಿಕೋದ್ಯಮ ಮತ್ತು ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಹೆಸರು. ಜೀವನೋಪಾಯಕ್ಕಾಗಿ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಅವಲಂಬಿಸಿದ್ದರೂ, ಮೂಲಭೂತವಾಗಿ ಅವರು ಸಾಹಿತ್ಯಕ ಒಲವಿನವರಾಗಿದ್ದು ಕನ್ನಡ ಸಾಹಿತ್ಯ ಲೋಕದ ವಿವಿಧ ಆಯಾಮಗಳಲ್ಲಿ ಸಮರ್ಥವಾಗಿ ಕೈಯಾಡಿಸಿ ಸೈ ಎನಿಸಿಕೊಂಡವರು "ಸೃಜನಾತ್ಮಕ-ಸಾಹಿತ್ಯ" ಎಂಬ ಹಣಿಪಟ್ಟಿಯಡಿಯಲ್ಲಿ ಬರುವ ಅವರ ಬರಹಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಸೀಮಿತವಾಗಿದ್ದರೂ ಗುಣಮಟ್ಟದಲ್ಲಿ ಅವು ಅಪ್ಪಟ ಚಿನ್ನ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಓರ್ವ ಪತ್ರಿಕಾ ಸಂಪಾದಕರಾಗಿ ತನ್ನ ವೃತ್ತಿ ಜೀವನದ ಬಹುಪಾಲು ಬೇರೆಯವರು ಬರೆದದ್ದನ್ನು ತಿದ್ದಿ ತೀಡಿ ಪ್ರಕಟನೆಗೆ ಯೋಗ್ಯವೆನಿಸಲು ಶ್ರಮಿಸಿದ ಅವರಿಗೆ ಸಾಹಿತ್ಯರಂಗದಲ್ಲಿ ತನ್ನದೇ ಆದ ಕೃಷಿ ಮಾಡಲು ಸಮಯಾವಕಾಶ ಸಾಕಷ್ಟು ಇರಲಿಲ್ಲ.

1915 ಫೆಬ್ರವರಿ 6ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯರು ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ಸೋದೆ ಮತ್ತು ಉಡುಪಿಯಲ್ಲಿ ತನ್ನ ಬಾಲ್ಯವನ್ನು ತೀರ ಬಡತನದಲ್ಲಿ ಕಳೆದರು. ಮೆಟ್ರಿಕ್‍ವರೆಗೆ ಹಾಗೂ ಹೀಗೂ ವಿದಾಭ್ಯಾಸವನ್ನು ಉಚ್ಚ ಶ್ರೇಣಿಯಲ್ಲಿ ಪೂರೈಸಿದರಾದರೂ ಆರ್ಥಿಕ ಅಡಚಣೆಯಿಂದಾಗಿ ಕಲಿಕೆಯನ್ನು ಅವರಿಗೆ ಮುಂದುವರಿಸಲು ಸಾಧ್ಯವಾಗದೇ ಹೋಯಿತು. ಮುಂದೆ ಓದಿ...

ಪ್ರಶಸ್ತಿಗಳು

ಪತ್ರಿಕಾ ವರದಿಗಳು

ಲಾಂಗೂಲಾಚಾರ್ಯ, ಪಾವೆಂ ಮುಂತಾದ ಹೆಸರುಗಳಿಂದ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣ ಆಚಾರ್ಯರು ಬರಿಯ ಪತ್ರಿಕೋದ್ಯಮಿಯಷ್ಟೇ ಅಲ್ಲ, ಕರ್ನಾಟಕದ ಹಿರಿಯ ಚಿಂತಕ, ಹರಟೆಮಲ್ಲ, ಲೇಖಕ,ಕವಿ ಕೂಡ ಹೌದು. ಕಸ್ತೂರಿಯ ಸಂಪಾದಕರಾಗಿ ಇವರು ಏರಿದ ಎತ್ತರಕ್ಕೆ , ಬಿತ್ತರಕ್ಕೆ ಎಣೆಯಲ್ಲ. ಎಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿ ಬೆಳೆದವರಿಗೆ ವಿಸ್ಮಯದ ಮೂರ್ತಿಯಾಗಿ ಕಂಡವರು. ಗಂಭೀರ ವ್ಯಂಗ್ಯಕ್ಕೆ ಇವರದು ಪರ್ಯಾಯ ಹೆಸರು.ಪ್ರಚಾರದಿಂದ ಬಲುದೂರ ನಿಲ್ಲುವ ಪಾವೆಂ ಆಬಾಲವೃದ್ಧರಿಗೆ ಪ್ರಿಯವಾಗುವಂತಹ ವ್ಯಕ್ತಿ. ಇನ್ನಷ್ಟು ನೋಡಿ...